kn_tn/ROM/13/03.md

3.0 KiB

ಯಾಕೆಂದರೆ

ಪೌಲನು ೧೩:೨ ವಿವರಿಸುತ್ತಿದ್ದಾನೆ ಮತ್ತು ಸರ್ಕಾಯವು ಒಬ್ಬ ವ್ಯಕ್ತಿಯನ್ನು ಶಿಕ್ಷಿಸುವಾಗ ಅದರ ಪರಿಣಾಮ ಏನು ಎಂಬದನ್ನು ಹೇಳುತ್ತಿದ್ದಾನೆ.

ಅಧಿಕಾರಿಗಳಿಗೆ ಭಯಪಡಬೇಕಾಗಿಲ್ಲ

ಅಧಿಕಾರಿಗಳು ಒಳ್ಳೆಯವರಿಗೆ ಭಯವನ್ನುಂಟು ಮಾಡುವದಿಲ್ಲ.

ಒಳ್ಳೆಯ ಕಾರ್ಯಗಳನ್ನು ಮಾಡುವುದು...ಕೆಟ್ಟ ಕಾರ್ಯಗಳನ್ನು ಮಾಡುವುದು

ಜನರನ್ನು ಅವರ ಒಳ್ಳೆಯ ಕಾರ್ಯಗಳು ಅಥವಾ ಕೆಟ್ಟ ಕಾರ್ಯಗಳಿಂದ ಗುರುತಿಸಲಾಗುವುದು (ಮೆಟಾನಿಮೈ ನೋಡಿರಿ)

ಅಧಿಕಾರಿಗಳಿಗೆ ಭಯಪಡದೆ ಇರಬೇಕೆಂದು ಅಪೇಕ್ಷಿಸುತ್ತೀಯೋ?

ಪರ್ಯಾಯ ಭಾಷಾಂತರ: "ಅಧಿಕಾರಿಗಳಿಗೆ ಭಯಪಡದೆ ಇರುವದು ಹೇಗೆ ಎಂಬದನ್ನು ನಾನು ಹೇಳುತ್ತಿದ್ದೇನೆ." (ಆಲಂಕಾರಿಕ ಪ್ರಶ್ನೆ ನೋಡಿರಿ)

ನಿಮಗೆ ಆತನಿಂದಲೇ ಹೊಗಳಿಗೆ ಬರುವದು

ಒಳ್ಳೆಯ ಕಾರ್ಯಗಳನ್ನು ಮಾಡುವವರ ಬಗ್ಗೆ ಸರ್ಕಾರವು ಒಳ್ಳೆಯದಾಗಿ ಮಾತನಾಡುವುದು.

ಅವನು ಸುಮ್ಮನೆ ಕೈಯಲ್ಲಿ ಕತ್ತಿಯನ್ನು ಹಿಡಿದಿಲ್ಲ

"ಜನರನ್ನು ಶಿಕ್ಷಿಸುವ ಅಧಿಕಾರವು ಅವನಿಗಿದೆ ಮತ್ತು ಅವನು ಜನರನ್ನು ಶಿಕ್ಷಿಸುವನು" (ಲಿಟೋಟಸ್ ನೋಡಿರಿ)

ಕತ್ತಿಯನ್ನು ಹಿಡಿದಿಲ್ಲ

ರೋಮನ್ ಅಧಿಕಾರಿಗಳು ನಮ್ಮ ಅಧಿಕಾರದ ಗುರುತಾಗಿ ಚಿಕ್ಕ ಕತ್ತಿಯನ್ನು ಹಿಡಿದುಕೊಂಡಿರುತ್ತಿದ್ದರು (ಮೆಟಾನಿಮೈ ನೋಡಿರಿ)

ನ್ಯಾಯವಾಗಿ ತೋರುವ ಕೋಪ

"ದುಷ್ಟತನಕ್ಕೆ ವಿರುದ್ಧವಾಗಿ ಅಧಿಕಾರದ ಕೋಪವನ್ನು ತೋರಿಸುವ ಸಲುವಾಗಿ ಜನರನ್ನು ಶಿಕ್ಷಿಸುತ್ತಾನೆ" (ಎಲಿಪ್ಸಿಸ್ ನೋಡಿರಿ)

ಕೋಪದಿಂದ ಮಾತ್ರವಲ್ಲ ಬದಲಾಗಿ ಮನಸ್ಸಾಕ್ಷಿಯ ನಿಮಿತ್ತವಾಗಿಯೂ

"ಸರ್ಕಾರವು ನಿಮ್ಮನ್ನು ಶಿಕ್ಷಿಸುವುದು ಮಾತ್ರವಲ್ಲ ದೇವರ ಎದುರಿನಲ್ಲಿ ನಿಮಗೆ ಶುದ್ಧ ಮನಸ್ಸಾಕ್ಷಿಯೂ ಇರುವುದು"