kn_tn/LUK/23/33.md

2.5 KiB

ಅವರು ಬಂದಾಗ

"ಅವರು" ಎಂಬ ಪದವು ಸಿಪಾಯಿಗಳು, ದುಷ್ಕರ್ಮಿಗಳು ಮತ್ತು ಯೇಸು ಕ್ರಿಸ್ತನನ್ನು ಒಳಗೊಂಡಿವೆ.

ಅವರು ಆತನನ್ನು ಶಿಲುಬೆಗೆ ಹಾಕಿದರು

"ಸಿಪಾಯಿಗಳು ಆತನನ್ನು ಶಿಲುಬೆಗೆ ಹಾಕಿದರು"

ಒಬ್ಬನನ್ನು ಬಲಗಡೆಯಲ್ಲಿ

"ದುಷ್ಕರ್ಮಿಗಳಲ್ಲಿ ಒಬ್ಬನನ್ನು ಯೇಸು ಕ್ರಿಸ್ತನ ಬಲಗಡೆಯಲ್ಲಿ ಶಿಲುಬೆಗೆ ಹಾಕಿದರು"

ಮತ್ತೊಬ್ಬನನ್ನು ಎಡಗಡೆಯಲ್ಲಿ

"ಮತ್ತೊಬ್ಬ ದುಷ್ಕರ್ಮಿಯನ್ನು ಯೇಸು ಕ್ರಿಸ್ತನ ಎಡಗಡೆಯಲ್ಲಿ ಶಿಲುಬೆಗೆ ಹಾಕಿದರು"

ಅವರನ್ನು ಕ್ಷಮಿಸು

"ಅವರನ್ನು" ಎಂಬ ಪದ ಯೇಸುವನ್ನು ಶಿಲುಬೆಗೆ ಹಾಕಿಸಿದವರನ್ನು ಸೂಚಿಸುತ್ತದೆ.

ತಾವು ಏನು ಮಾಡುತ್ತೇವೆಂಬದನ್ನು ಅರಿಯರು

"ಯಾಕೆಂದರೆ ತಾವು ಮಾಡುವ ಕಾರ್ಯವನ್ನು ಅವರು ಅರಿಯದವರಾಗಿದ್ದಾರೆ." ತಾವು ದೇವಕುಮಾರನನ್ನು ಶಿಲುಬೆಗೆ ಹಾಕಿಸುತ್ತಿದ್ದೇವೆ ಎಂಬದು ಸಿಪಾಯಿಗಳಿಗೆ ಅರ್ಥವಾಗಲಿಲ್ಲ. ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದಾಗಿದೆ "ಅವರು ಇದನ್ನು ಮಾಡುತ್ತಿರುವುದು ಯಾರಿಗೆ ಎಂಬದು ನಿಜವಾಗಿಯೂ ಅವರಿಗೆ ಗೊತ್ತಿರಲಿಲ್ಲ."

ಅವರು ಚೀಟು ಹಾಕಿದರು

ಸಿಪಾಯಿಗಳು ಒಂದು ರೀತಿ ಜೂಜು ಹಾಡಿದರು. ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದಾಗಿದೆ "ಅವರು ಚೀಟು ಹಾಕಿದರು."

ಆತನ ಬಟ್ಟೆಯನ್ನು ಹಂಚಿಕೊಂಡರು

ಯೇಸು ಕ್ರಿಸ್ತನ ವಸ್ತ್ರಗಳ ಯಾವ ಭಾಗವನ್ನು ಯಾರು ತೆಗೆದುಕೊಳ್ಳಬೇಕು ಎಂಬದಾಗಿ ತೀರ್ಮಾನಿಸಿಕೊಂಡರು."