kn_tn/LUK/10/01.md

1.6 KiB

ಎಪ್ಪತ್ತು

ಕೆಲವು ಆವೃತ್ತಿಗಳು "ಎಪ್ಪತ್ತೆರೆಡು" ಎಂದು ಹೇಳುತ್ತವೆ. ಇದನ್ನು ತಿಳಿಸುವ ಟಿಪ್ಪಣಿಯನ್ನು ಸಹ ನೀವು ಸೇರಿಸಿಕೊಳ್ಳಬೇಕಾಗುತ್ತದೆ.

ಅವರನ್ನು ಇಬ್ಬಿಬ್ಬರನ್ನಾಗಿ ಕಳುಹಿಸಿದನು

"ಅವರನ್ನು ಇಬ್ಬಿಬ್ಬರ ತಂಡವನ್ನಾಗಿ ಮಾಡಿ ಕಳುಹಿಸಿದನು" ಅಥವಾ "ಅವರನ್ನು ಒಂದು ಗುಂಪು ಮಾಡಿ ಅದರಲ್ಲಿ ಇಬ್ಬರನ್ನು ಕಳುಹಿಸಿದನು"

ಆತನು ಅವರಿಗೆ ಹೇಳಿದ್ದೇನೆಂದರೆ

ಜನರು ಹೊರಗೆ ಹೋಗುವುದಕ್ಕೆ ಮೊದಲು ಇದು ಹೇಳಿದ್ದಾಗಿದೆ. ಇದನ್ನು ಈ ರೀತಿಯಾಗಿಯೂ ಭಾಷಾಂತರ ಮಾಡಬಹುದಾಗಿದೆ "ಆತನು ಅವರಿಗೆ ಹೇಳಿದ್ದೇನೆಂದರೆ" ಅಥವಾ "ಅವರು ಹೊರಗೆ ಹೋಗುವ ಮೊದಲು ಆತನು ಅವರಿಗೆ ಹೇಳಿದ್ದೇನೆಂದರೆ."

ಬೆಳೆಯು ಬಹಳ ಕೆಲಸಗಾರರು ಕಡಿಮೆ

"ಬೆಳೆಯು ಬಹಳವಾಗಿದೆ ಆದರೆ ಕೆಲಸಗಾರರು ತುಂಬಾ ಕಡಿಮೆಯಿದ್ದಾರೆ." ಈ ರೂಪಕಾಲಂಕಾರದ ಅರ್ಥ ದೇವರಾಜ್ಯಕ್ಕೆ ಬರಲು ಅನೇಕರು ಸಿದ್ಧರಾಗಿದ್ದಾರೆ.