kn_tn/LUK/21/27.md

2.9 KiB

(ಯೇಸು ಕ್ರಿಸ್ತನು ಭವಿಷ್ಯದ ವಿಷಯವಾಗಿ ತನ್ನ ಶಿಷ್ಯರೊಂದಿಗೆ ಮಾತನಾಡುವುದನ್ನು ಮುಂದುವರೆಸುತ್ತಿದ್ದಾನೆ.)

ಮನುಷ್ಯಕುಮಾರನು

ಯೇಸು ಕ್ರಿಸ್ತನು ತನ್ನನ್ನು ಸೂಚಿಸುತ್ತಿದ್ದಾನೆ.

ಮೇಘದೋಪಾದಿಯಲ್ಲಿ ಬರುವನು

ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದಾಗಿದೆ "ಮೇಘದಲ್ಲಿ ಇಳಿದು ಬರುವನು"

ಬಲದಿಂದಲೂ ಬಹುಮಹಿಮೆಯಿಂದಲೂ

ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದಾಗಿದೆ "ಬಲವಾಗಿಯೂ, ಪ್ರಭಾವದಿಂದ ಕೂಡಿದ್ದಾಗಿಯೂ" ಅಥವಾ "ಆತನು ಬಲವುಳ್ಳವನಾಗಿಯೂ ಮಹಿಮೆಯುಳ್ಳವನಾಗಿಯೂ ಇರುವನು." ಬಲ ಇಲ್ಲಿ ಬಹುಶಃ ಆತನ ಅಧಿಕಾರವನ್ನು ಸೂಚಿಸುತ್ತದೆ. ಮಹಿಮೆ ಉಜ್ವಲವಾದ ಬೆಳಕನ್ನು ಸೂಚಿಸುತ್ತದೆ. ದೇವರು ಕೆಲವೊಮ್ಮೆ ತನ್ನ ಪ್ರಭಾವವನ್ನು ಉಜ್ವಲವಾದ ಬೆಳಕಿನ ಮೂಲಕ ತೋರಿಸುತ್ತಾನೆ.

ಮೇಲಕ್ಕೆ ನೋಡಿರಿ

ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದಾಗಿದೆ "ಭರವಸೆಯಿಂದ ಮೇಲಕ್ಕೆ ನೋಡುವರು." ಕೆಲವೊಮ್ಮೆ ಜನರು ಭಯಪಡುವಾಗ, ಅವರು ತಮಗೆ ಗಾಯವಾಗದ ಹಾಗೆ ಕೆಳಗೆ ನೋಡುತ್ತಾರೆ. ಅವರು ಭಯಕ್ಕೆ ಒಳಗಾಗದಿರುವಾಗ, ಮೇಲಕ್ಕೆ ನೋಡುತ್ತಾರೆ.

ನಿಮ್ಮ ತಲೆಯನ್ನು ಮೇಲಕ್ಕೆ ಎತ್ತಿರಿ

ಇದು ನಾಣ್ಣುಡಿಯಾಗಿದ್ದು "ಮೇಲೆ ನೋಡಿರಿ" ಎಂಬ ಅರ್ಥವನ್ನು ಕೊಡುತ್ತದೆ. (ನಾಣ್ಣುಡಿ ನೋಡಿರಿ) ಮೇಲೆ ನೋಡುವುದರಿಂದ ಅವರು ತಮ್ಮ ಬಳಿಗೆ ಬರುವ ತಮ್ಮ ರಕ್ಷಕನ ಬಗ್ಗೆ ತಿಳಿದುಕೊಳ್ಳುವರು.

ನಿಮ್ಮ ಬಿಡುಗಡೆಯು ಸಮೀಪವಾಗಿರುವುದರಿಂದ

ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದಾಗಿದೆ "ನಿಮ್ಮ ರಕ್ಷಕನು ನಿಮ್ಮ ಬಳಿಗೆ ಬರುತ್ತಿದ್ದಾನೆ" ಅಥವಾ "ಯಾಕೆಂದರೆ ನಿಮಗೆ ಬೇಗನೇ ಬಿಡುಗಡೆಯಾಗುವದು."