2.4 KiB
2.4 KiB
ನೋಡಿರಿ
ಈ ಘಟನೆಯ ನಂತರದ ಸಮಯದಲ್ಲಿ ಸಂಭವಿಸುವುದಾಗಿದೆ. ಯುಡಿಬಿಯಲ್ಲಿರುವಂತೆ ನೀವು ಇದನ್ನು ಓದುಗನಿಗೆ ಸ್ಪಷ್ಟಪಡಿಸಬಹುದು: "ಒಂದುದಿನ ಯೇಸು ಕ್ರಿಸ್ತನು ಜನರಿಗೆ ಕಲಿಸುತ್ತಿರುವಾಗ."
ಆಗ ಒಬ್ಬ ಧರ್ಮೋಪದೇಶಕನು
"ಅಗ" ಎಂಬ ಪದವು ಕಥೆಯಲ್ಲಿ ಬರುವ ಹೊಸ ವ್ಯಕ್ತಿಯನ್ನು ನಮಗೆ ಪರಿಚಯಪಡಿಸುತ್ತದೆ. ನಿಮ್ಮ ಭಾಷೆಯಲ್ಲಿಯೂ ಈ ರೀತಿಯಾಗಿ ಮಾಡಲು ಅವಕಾಶವಿರಬಹುದು. ಕನ್ನಡದಲ್ಲಿ "ಒಬ್ಬ ಧರ್ಮೋಪದೇಶಕನಿದ್ದನು..."
ಆತನನ್ನು ಪರೀಕ್ಷಿಸಿದನು
"ಯೇಸುವನ್ನು ಪರೀಕ್ಷಿಸಿದನು"
ಧರ್ಮಶಾಸ್ತ್ರದಲ್ಲಿ ಬರೆಯಲಾಗಿರುವುದು
ಇದನ್ನು ಸಕ್ರಿಯವಾದ ಕ್ರಿಯಾಪದದೊಂದಿಗೆ ಭಾಷಾಂತರ ಮಾಡಬಹುದಾಗಿದೆ: "ಮೋಶೆಯು ಧರ್ಮಶಾಸ್ತ್ರದಲ್ಲಿ ಏನೆಂದು ಬರೆದಿದ್ದಾನೆ" ಅಥವಾ "ಧರ್ಮಶಾಸ್ತ್ರವು ಏನು ಹೇಳುತ್ತದೆ?" (ಸಕ್ರಿಯ ಅಥವಾ ನಿಷ್ಕ್ರಿಯ)
ನೀನು ಹೇಗೆ ಓದಿದ್ದೀ
"ನೀವು ಅದರಲ್ಲಿ ಏನು ಓದಿದ್ದೀರಿ?" ಅಥವಾ "ಅದರಲ್ಲಿ ಬರೆದಿರುವುದು ನಿಮಗೆ ಹೇಗೆ ಅರ್ಥವಾಗಿದೆ?"
ನೀನು ಪ್ರೀತಿಸಬೇಕು...
ಇದಕ್ಕೆ ಉತ್ತರವಾಗಿ ಆ ಮನುಷ್ಯನು ಧರ್ಮೋಪದೇಶಕಾಂಡ ೧೯:೧೮ ವಾಕ್ಯವನ್ನು ಹೇಳಿದನು.
ನಿನ್ನ ನೆರೆಯವನು
ಇದು ನಿಮ್ಮ ಸಮುದಾಯದ ಸದಸ್ಯರನ್ನು ಸೂಚಿಸುತ್ತದೆ. ಇದನ್ನು "ನಿಮ್ಮ ಜೊತೆಯ ಪೌರರು" ಅಥವಾ "ನಿಮ್ಮ ಸಮುದಾಯದ ಜನರು" ಎಂದು ಭಾಷಾಂತರ ಮಾಡಬಹುದಾಗಿದೆ.