kn_tn/LUK/10/22.md

2.9 KiB

(ಯೇಸು ಕ್ರಿಸ್ತನು ಈಗ ತನ್ನ ಶಿಷ್ಯರೊಂದಿಗೆ ಮಾತನಾಡುತ್ತಿದ್ದಾನೆ.)

ಇದಕ್ಕೆ ನೀವು ಪರಿಚಯಪಡಿಸುವ ಹೇಳಿಕೆಯನ್ನು ಸೇರಿಸಬಹುದು "ಯೇಸು ಕ್ರಿಸ್ತನು ಇನ್ನೂ ತನ್ನ ಶಿಷ್ಯರಿಗೆ ಹೇಳಿದ್ದೇನೆಂದರೆ" (ಯುಡಿಬಿ).

ನನ್ನ ತಂದೆಯು ನನಗೆ ಎಲ್ಲಾ ಕಾರ್ಯಗಳನ್ನು ವಹಿಸಿಕೊಟ್ಟಿದ್ದಾನೆ

ಇದನ್ನು ಸಕ್ರಿಯವಾದ ಕ್ರಿಯಾಪದದೊಂದಿಗೆ ಭಾಷಾಂತರ ಮಾಡಬಹುದಾಗಿದೆ: "ನನ್ನ ತಂದೆಯು ಎಲ್ಲವನ್ನು ನನಗೆ ಒಪ್ಪಿಸಿದ್ದಾನೆ." (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)

ಮಗನು

ಯೇಸು ಕ್ರಿಸ್ತನು ತನ್ನನ್ನೇ ಮೂರನೆಯ ವ್ಯಕ್ತಿಯಲ್ಲಿ ಸೂಚಿಸುತ್ತಿದ್ದಾನೆ. (ಮೊದಲ, ದ್ವಿತೀಯ ಮತ್ತು ತೃತೀಯ ವ್ಯಕ್ತಿ ನೋಡಿರಿ)

ಮಗ ಯಾರೆಂಬದನ್ನು ಬಲ್ಲವನಾಗಿದ್ದಾನೆ

"ಬಲ್ಲವನಾಗಿದ್ದಾನೆ" ಎಂದು ಭಾಷಾಂತರ ಮಾಡಲಾಗಿರುವ ಪದದ ಅರ್ಥ ವೈಯಕ್ತಿಕ ಅನುಭವ ಎಂಬದಾಗಿದೆ. ತಂದೆಯಾದ ದೇವರು ಈ ರೀತಿಯಾಗಿ ಯೇಸು ಕ್ರಿಸ್ತನ ಬಗ್ಗೆ ಬಲ್ಲವನಾಗಿದ್ದನು.

ತಂದೆಯೇ ಹೊರತು

ಇದರ ಅರ್ಥ "ಕೇವಲ ತಂದೆಗೆ ಮಾತ್ರವೇ ಮಗನು ಯಾರೆಂಬದು ಗೊತ್ತಿದೆ."

ತಂದೆ ಯಾರೆಂಬದು ಗೊತ್ತಿದೆ

"ಗೊತ್ತಿದೆ" ಎಂಬದಾಗಿ ಭಾಷಾಂತರ ಮಾಡಲಾಗಿರುವ ಪದದ ಅರ್ಥ ವೈಯಕ್ತಿಕ ಅನುಭವವಾಗಿದೆ. ಯೇಸು ಕ್ರಿಸ್ತನು ತನ್ನ ತಂದೆಯಾದ ದೇವರನ್ನು ಈ ರೀತಿಯಾಗಿ ಬಲ್ಲವನಾಗಿದ್ದನು

ಮಗನ ಹೊರತು

ಇದರ ಅರ್ಥ "ಕೇವಲ ಮಗನಿಗೆ ಮಾತ್ರವೇ ತಂದೆ ಯಾರೆಂಬದು ಗೊತ್ತಿದೆ."

ಮತ್ತು ಮಗನು ಯಾರಿಗೆ ತನ್ನನ್ನು ಪ್ರಕಟಪಡಿಸಬೇಕೆಂದು ಬಯಸುತ್ತಾನೋ

ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದಾಗಿದೆ "ಜನರು ತಂದೆ ಯಾರೆಂಬದು ಗೊತ್ತಾಗುತ್ತದೆ ಆದರೆ ಮಗನು ಅವರಿಗೆ ತಂದೆಯ ಬಗ್ಗೆ ವಿವರಿಸಿದರೆ ಮಾತ್ರವೇ."