2.8 KiB
(ಯೇಸು ಕ್ರಿಸ್ತನು ತನ್ನ ಶಿಷ್ಯರ ಎದುರಿನಲ್ಲಿ ನೇರವಾಗಿ ತಂದೆಯಾದ ದೇವರೊಂದಿಗೆ ಮಾತನಾಡಲು ಪ್ರಾರಂಭಿಸಿದನು.)
ಭೂಪರಲೋಕಗಳ ಕರ್ತನು
"ಎಲ್ಲದರ ಮೇಲೆ ಮತ್ತು ಭೂಪರಲೋಕಗಳಲ್ಲಿರು ಎಲ್ಲವುಗಳಿಗೆ ಯಜಮಾನನು"
ಈ ಕಾರ್ಯಗಳು
ಶಿಷ್ಯರಿಗೆ ಅಧಿಕಾರವನ್ನು ಕೊಟ್ಟದ್ದರ ಬಗ್ಗೆ ಯೇಸು ಕ್ರಿಸ್ತನು ಹಿಂದಿನ ವಚನದಲ್ಲಿ ನೀಡಿದ ಬೋಧನೆಯ ಬಗ್ಗೆ ಇವುಗಳ ತಿಳಿಸುತ್ತವೆ. "ಈ ಕಾರ್ಯಗಳು" ಎಂದು ಸುಲಭವಾಗಿ ಹೇಳಬಹುದಾಗಿದೆ ಮತ್ತು ಓದುಗರು ಇದರ ಅರ್ಥವನ್ನು ತಿಳಿದುಕೊಳ್ಳಬೇಕಾಗಿದೆ.
ಜ್ಞಾನಿಗಳು ಮತ್ತು ತಿಳುವಳಿಕೆಯುಳ್ಳವರು
"ಜನರ ನಡುವೆ ಜ್ಞಾನಿಗಳು ಮತ್ತು ತಿಳುವಳಿಕೆಯುಳ್ಳವರು." ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದಾಗಿದೆ "ತಾವು ಜ್ಞಾನಿಗಳು ಮತ್ತು ತಿಳುವಳಿಕೆಯುಳ್ಳವರು ಎಂದು ಜನರಲ್ಲಿ ಆಲೋಚಿಸುವವರು." (ವ್ಯಂಗ್ಯ ನೋಡಿರಿ)
ಚಿಕ್ಕಮಕ್ಕಳ ಹಾಗೆ, ತರಬೇತಿ ಇಲ್ಲದವರು
ಗ್ರೀಕ್ ನಲ್ಲಿ ಈ ಪದವು ತುಂಬಾ ಚಿಕ್ಕ ಮಕ್ಕಳನ್ನು ಸೂಚಿಸುತ್ತದೆ. ಅರ್ಥಗಳು ಏನಾಗಿರುವವೆಂದರೆ ೧) "ತರಬೇತಿಯಿಲ್ಲದವರು" ಅಥವಾ ೨) "ನಿಮ್ಮ ಸತ್ಯವನ್ನು ಸಿದ್ಧವಾಗಿ ಅಂಗೀಕರಿಸಿಕೊಳ್ಳುವವರು" (ಯುಡಿಬಿ).
ಚಿಕ್ಕ ಮಕ್ಕಳಂತೆ
ಮಕ್ಕಳ ಹಾಗೆ ಬುದ್ದಿ ಮತ್ತು ತಿಳುವಳಿಕೆಯಿಲ್ಲದ ಜನರನ್ನು ಸೂಚಿಸಲು ಈ ಉಪಮೆಯನ್ನು ಬಳಸಲಾಗಿದೆ ಅಥವಾ ತಾವು ಬುದ್ದಿವಂತರು ಮತ್ತು ತಿಳುವಳಿಕೆಯುಳ್ಳವರು ಎಂದು ಗೊತ್ತಿಲ್ಲದಿರುವ ಜನರು. (ಉಪಮೆ ನೋಡಿರಿ)
ಹೀಗೆ ಮಾಡುವುದೇ ಒಳ್ಳೇದೆಂದು ನಿನ್ನ ದೃಷ್ಟಿಗೆ ತೋರಿ
"ಯಾಕೆಂದರೆ ಹೀಗೆ ಮಾಡುವುದು ಒಳ್ಳೇದೆಂದು ನಿನಗೆ ತೋರಿದೆ"