kn_tn/LUK/10/10.md

3.2 KiB

(ಯೇಸು ಕ್ರಿಸ್ತನು ತಾನು ಕಳುಹಿಸಿಕೊಡುತ್ತಿದ್ದ ೭೦ ಜನರಿಗೆ ಸೂಚನೆಗಳ ಕೊಡುವುದನ್ನು ಮುಂದುವರೆಸುತ್ತಿದ್ದಾನೆ.)

ಮತ್ತು ಅವರು ನಿಮ್ಮ ಬರಮಾಡಿಕೊಳ್ಳದಿದ್ದರೆ

"ಒಂದುವೇಳೆ ಅವರು ನಿಮ್ಮನ್ನು ನಿರಾಕರಿಸಿದರೆ"

ನಿಮ್ಮ ಊರಿಂದ ನಮ್ಮ ಕಾಲುಗಳಿಗೆ ಹತ್ತಿದ ದೂಳನ್ನು ಒರೆಸಿಬಿಡುತ್ತೇವೆ!

ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದು "ನೀವು ನಮ್ಮನ್ನು ನಿರಾಕರಿಸಿದಂತೆಯೇ, ನಾವೂ ನಿಮ್ಮನ್ನು ಸಂಪೂರ್ಣವಾಗಿ ನಿರಾಕರಿಸುತ್ತೇವೆ. ನಮ್ಮ ಕಾಲುಗಳಿಗೆ ಹತ್ತಿದ ನಿಮ್ಮ ಊರಿನ ದೂಳನ್ನೂ ನಾವು ಒರೆಸಿಬಿಡುತ್ತೇವೆ." ಯೇಸು ಕ್ರಿಸ್ತನು ಈ ಜನರನ್ನು ಇಬ್ಬಿಬ್ಬರಾಗಿ ಕಳುಹಿಸುತ್ತಿದ್ದರಿಂದ, ಇಬ್ಬರೂ ಈ ಮಾತುಗಳನ್ನು ಹೇಳಬೇಕು. ಆದ್ದರಿಂದ "ನಾವು" ರೂಪಕವಿರುವ ಭಾಷೆಗಳು ಇದನ್ನು ಉಪಯೋಗಿಸಬೇಕು. (ಕನ್ನಡ ಬಹುವಚನ ಸರ್ವನಾಮಗಳನ್ನು ನೋಡಿರಿ)

ಆದಾಗ್ಯೂ ದೇವರ ರಾಜ್ಯವು ನಿಮ್ಮ ಸಮೀಪಕ್ಕೆ ಬಂದದೆ ಎಂದು ನಿಮಗೆ ತಿಳಿದಿರಲಿ

"ದೇವರ ರಾಜ್ಯವು ನಿಮ್ಮ ಸಮೀಪ ಇದೆ."

ನಾನು ನಿಮಗೆ ಹೇಳುವದೇನೆಂದರೆ

ಯೇಸು ಕ್ರಿಸ್ತನು ತಾನು ಕಳುಹಿಸುತ್ತಿದ್ದ ೭೦ ಜನರಿಗೆ ಇದನ್ನು ಹೇಳುತ್ತಿದ್ದಾನೆ. ತಾನು ಪ್ರಾಮುಖ್ಯವಾದ ಸಂಗತಿಯನ್ನು ಅವರಿಗೆ ಹೇಳುತ್ತಿರುವುದಾಗಿ ಸೂಚಿಸಲು ಈ ಮಾತನ್ನು ಹೇಳಿದ್ದಾನೆ.

ನ್ಯಾಯವಿಚಾರಣೆಯ ದಿನದಲ್ಲಿ

ಈ ಪದಾಂಶವು ಹೇಳುವದೇನೆಂದರೆ "ಆ ದಿನದಲ್ಲಿ." ಆದರೆ ಶಿಷ್ಯರು ಇದನ್ನು ಪಾಪಿಗಳಿಗಾಗುವ ಅಂತಿಮ ತೀರ್ಪಿನ ಸಮಯವನ್ನು ಇದು ಸೂಚಿಸುತ್ತದೆ ಎಂಬದಾಗಿ ಅರ್ಥಮಾಡಿಕೊಳ್ಳುವರು. (ಸ್ಪಷ್ಟ ಮತ್ತು ಅಸ್ಪಷ್ಟ ನೋಡಿರಿ)

ಆ ಊರಿನ ಗತಿಯು ಸೂದೊಗೊಮೂರಿನ ಗತಿಗಿಂತಲೂ ಕಠಿಣವಾಗಿರುವುದು

"ಸೊದೊಮಿಗಿಂತಲೂ ಆ ಊರಿನವರಿಗೆ ಕಠಿಣವಾಗಿ ವಿಚಾರಣೆ ಆಗುವುದು." ಇದರ ಅರ್ಥ "ಬಹುಕಠಿಣವಾದ ವಿಚಾರಣೆಗೆ ಆ ಊರು ಗುರಿಯಾಗುವುದು."