3.3 KiB
(ಯೇಸು ಕ್ರಿಸ್ತನು ತಾನು ಕಳುಹಿಸಿಕೊಡುತ್ತಿದ್ದ ೭೦ ಜನರಿಗೆ ಸೂಚನೆಗಳ ಕೊಡುವುದನ್ನು ಮುಂದುವರೆಸುತ್ತಿದ್ದಾನೆ.)
ಈ ಮನೆಗೆ ಶುಭವಾಗಲಿ
"ಈ ಮನೆಯಲ್ಲಿರುವ ಜನರೆಲ್ಲರಿಗೆ ಶುಭವಾಗಲಿ." ಇದು ವಂದನೆ ಮತ್ತು ಆಶೀರ್ವಾದ ಎರಡೂ ಆಗಿದೆ.
ಆಶೀರ್ವಾದ ಪಾತ್ರನು
"ಆಶೀರ್ವಾದಕ್ಕೆ ಪಾತ್ರನಾದ ವ್ಯಕ್ತಿ." ಈ ವ್ಯಕ್ತಿಯು ದೇವರ ಮತ್ತು ಮನುಷ್ಯರ ಆಶೀರ್ವಾದವನ್ನು ಬಯಸುವವನಾಗಿರುತ್ತಾನೆ.
ನಿಮ್ಮ ಸಮಾಧಾನವು ಅವನ ಮೇಲೆ ನೆಲೆಯಾಗುವುದು
ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದು "ನೀವು ಆತನನ್ನು ಆಶೀರ್ವದಿಸುವುದರಿಂದ ನಿಮ್ಮ ಸಮಾಧಾನವು ಆತನ ಮೇಲೆ ನೆಲೆಯಾಗಿರುವುದು."
ಒಂದುವೇಳೆ ಇಲ್ಲವಾದರೆ
"ಒಂದುವೇಳೆ ಆಶೀರ್ವಾದಕ್ಕೆ ಪಾತ್ರನಾಗುವವನು ಅಲ್ಲಿ ಇಲ್ಲದಿದ್ದರೆ" ಅಥವಾ "ಒಂದುವೇಳೆ ಮನೆಯ ಯಜಮಾನನು ಆಶೀರ್ವಾದಕ್ಕೆ ಪಾತ್ರನಾಗುವ ವ್ಯಕ್ತಿಯಲ್ಲದಿದ್ದರೆ"
ಅದು ನಿಮಗೇ ಹಿಂದಿರುಗುವುದು
"ಆ ಸಮಾಧಾನವು ನಿಮ್ಮ ಬಳಿಯಲ್ಲಿಯೇ ಇರುವುದು"
ಆ ಮನೆಯಲ್ಲಿಯೇ ಉಳಿಯಿರಿ
ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದಾಗಿದೆ "ಆ ಮನೆಯಲ್ಲಿಯೇ ಮಲಗುವುದನ್ನು ಅಭ್ಯಾಸ ಮಾಡಿರಿ." ಯೇಸು ಕ್ರಿಸ್ತನು ಅವರಿಗೆ ಇಡೀ ದಿನ ಆ ಮನೆಯಲ್ಲಿಯೇ ಇರಬೇಕು ಎಂಬದಾಗಿ ಹೇಳುತ್ತಿಲ್ಲ ಬದಲಾಗಿ ಅವರು ಅಲ್ಲಿರುವಷ್ಟು ಕಾಲ ರಾತ್ರಿಯ ಸಮಯದಲ್ಲಿ ಅಲ್ಲಿ ಮಲಗಬೇಕು ಎಂದು ಹೇಳುತ್ತಿದ್ದಾನೆ.
ಆಳು ತನ್ನ ಕೂಲಿಗೆ ಯೋಗ್ಯನಷ್ಟೇ
ಇದು ಹುದುವಾದ ತತ್ವವಾಗಿದ್ದು ಯೇಸು ಕ್ರಿಸ್ತನು ತಾನು ಕಳುಹಿಸುವ ಜನರಿಗೆ ಅನ್ವಯವಾಗುವಂತೆ ಹೇಳುತ್ತಿದ್ದಾನೆ. ಅವರು ಜನರಿಗೆ ಬೋಧಿಸುವವರು ಮತ್ತು ಗುಣಪಡಿಸುವವರು ಆಗಿರುವುದರಿಂದ ಜನರು ಅವರಿಗೆ ಉಳಿಯಲು ಸ್ಥಳ ಮತ್ತು ತಿನ್ನಲು ಆಹಾರವನ್ನು ಕೊಡಬೇಕು.
ಮನೆಮನೆಗೆ ಹೋಗಬೇಡಿರಿ
ಇದರ ಅರ್ಥ "ರಾತ್ರಿಯ ಸಮಯ ಮಲಗಲು ಬೇರೆಬೇರೆ ಮನೆಗಳಿಗೆ ಹೋಗಬೇಡೀರಿ."