kn_tn/LUK/02/01.md

3.8 KiB

ಈಗ

ಬರಹಗಾರನು ಮತ್ತೊಂದು ವಿಷಯವನ್ನು ಪರಿಚಯಪಡಿಸುತ್ತಿದ್ದಾನೆ ಎಂಬದನ್ನು ಈ ಪದವು ತೋರಿಸುತ್ತದೆ.

ಆ ಕಾಲದಲ್ಲಿ

ಇದು ದಾಖಲೆಯ ಪ್ರಾರಂಭವಾಗಿದೆ ಎಂಬದನ್ನು ತೋರಿಸಲು ಈ ಪದವನ್ನು ಬಳಸಲಾಗಿದೆ. ಒಂದುವೇಳೆ ನಿಮ್ಮ ಭಾಷೆಯಲ್ಲಿ ಹೊಸ ವಿಷಯ ಪ್ರಾರಂಭವಾಗುವುದನ್ನು ತೋರಿಸುವ ವಿಧಾನ ಇರುವುದಾದರೆ, ಹಾಗೆಯೇ ನೀವು ಹೇಳಬಹುದು. ಕೆಲವು ಆವೃತ್ತಿಗಳು ಈ ಪದವನ್ನು ಸೇರಿಸಿಕೊಂಡಿಲ್ಲ.

ಚಕ್ರವರ್ತಿಯಾದ ಔಗುಸ್ತನು

"ಅರಸನಾದ ಔಗುಸ್ತನು" ಅಥವಾ "ಚಕ್ರವರ್ತಿಯಾದ ಔಗುಸ್ತನು." ಔಗುಸ್ತನು ರೋಮನ್ ಸಾಮ್ರಾಜ್ಯದ ಮೊದಲ ಚಕ್ರವರ್ತಿಯಾಗಿದ್ದನು. (ಹೆಸರುಗಳ ಭಾಷಾಂತರ ನೋಡಿರಿ)

ಆಜ್ಞೆಯನ್ನು ಹೊರಡಿಸಿದನು

ಆಜ್ಞೆ ಎಂದರೆ ಆದೇಶ. ಇದನ್ನು ಈ ರೀತಿಯಾಗಿಯೂ ಭಾಷಾಂತರ ಮಾಡಬಹುದಾಗಿದೆ "ಆಜ್ಞೆ" ಅಥವಾ "ಆದೇಶ" ಅಥವಾ "ಆದೇಶ ಹೊರಡಿಸಿದನು."

ಖಾನೇಷುಮಾರಿ

ಖಾನೇಷುಮಾರಿಯು ಅಧಿಕೃತ ಜನಗಣತಿ ಮತ್ತು ಕ್ಷೇತ್ರ ಅಥವಾ ದೇಶದಲ್ಲಿರುವ ಎಲ್ಲಾ ಜನರ ಲೆಕ್ಕಿಸುವಿಕೆಯಾಗಿದೆ. ಚಂದಾಹಣವನ್ನು ಶೇಖರಿಸಲು ಇದನ್ನು ಮಾಡಲಾಗುತ್ತಿತ್ತು.

ರೋಮನ್ ಲೋಕದಲ್ಲಿ ಜೀವಿಸುತ್ತಿದ್ದ ಎಲ್ಲಾ ಜನರ ಗಣತಿಯನ್ನು ಮಾಡಬೇಕು

ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದು "ರೋಮಾ ಲೋಕದಲ್ಲಿ ಜೀವಿಸುತ್ತಿರುವ ಜನರ ನೋಂದಾಣಿಯನ್ನು ಮಾಡಿಸಬೇಕು" ಅಥವಾ "ಅವರು ರೋಮನ್ ಲೋಕದಲ್ಲಿರುವ ಎಲ್ಲಾ ಜನರನ್ನು ಲೆಕ್ಕಿಸಬೇಕು ಮತ್ತು ಅವರ ಹೆಸರುಗಳನ್ನು ಬರೆಯಬೇಕು."

ರೋಮನ್ ಲೋಕ

ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದು "ರೋಮನ್ ಸರ್ಕಾರವು ನಿಯಂತ್ರಣದಲ್ಲಿಟ್ಟುಕೊಂಡಿದ್ದ ಲೋಕದ ಭಾಗ" ಅಥವಾ "ರೋಮನ್ ಸಾಮ್ರಾಜ್ಯ."

ಕುರೇನ್ಯನು

ಕುರೇನ್ಯನನ್ನು ಸ್ರಿಯಕ್ಕೆ ಅಧಿಪತಿಯನ್ನಾಗಿ ನೇಮಕ ಮಾಡಲಾಗಿತ್ತು. (ಹೆಸರುಗಳ ಭಾಷಾಂತರ ನೋಡಿರಿ)

ಪ್ರತಿಯೊಬ್ಬರೂ ಹೋದರು

ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದು "ಪ್ರತಿಯೊಬ್ಬರೂ ಹೊರಡಲು ಪ್ರಾರಂಭಿಸಿದರು" ಅಥವಾ "ಎಲ್ಲರೂ ಹೊರಟರು."

ತಮ್ಮ ಊರು

"ತನ್ನ ಪೂರ್ವಿಕರು ಜೀವಿಸಿದ ಉರು"

ಖಾನೇಷುಮಾರಿ ಬರೆಸಿಕೊಳ್ಳಲು

"ತಮ್ಮ ಹೆಸರುಗಳನ್ನು ಬರೆಸಿಕೊಳ್ಳಲು" ಅಥವಾ "ಅಧಿಕೃತವಾಗಿ ತಮ್ಮ ಹೆಸರುಗಳನ್ನು ಬರೆಸಿಕೊಳ್ಳಲು"