kn_tn/1JN/02/07.md

2.6 KiB

ಪ್ರಿಯರೇ

ಇದನ್ನು "ಸ್ನೇಹಿತರೇ" ಅಥವಾ "ಕ್ರಿಸ್ತನಲ್ಲಿ ಪ್ರಿಯ ವಿಶ್ವಾಸಿಗಳೇ" ಎಂದು ಭಾಷಾಂತರ ಮಾಡಬಹುದಾಗಿದೆ.

ನಾನು ನಿಮಗೆ ಹೊಸ ಆಜ್ಞೆಯನ್ನು ಬರೆಯುತ್ತಿಲ್ಲ, ಬದಲಾಗಿ ಹಳೆಯ ಅಪ್ಪಣೆಯನ್ನು ತಿಳಿಸುತ್ತಿದ್ದೇನೆ

ಒಬ್ಬರನ್ನೊಬ್ಬರು ಪ್ರೀತಿಸಿರಿ ಎಂಬ ಯೇಸು ಕ್ರಿಸ್ತನ ಆಜ್ಞೆಯನ್ನು ಯೋಹಾನನು ನೆನೆಪಿಸುತ್ತಿದ್ದಾನೆ. "ಒಬ್ಬರನ್ನೊಬ್ಬರು ಪ್ರೀತಿಸಿರಿ ಎಂದು ನಾನು ನಿಮಗೆ ಬರೆಯುತ್ತಿದ್ದೇನೆ. ಅಂದರೆ ಇದು ನೀವು ಮಾಡಬೇಕಾಗಿರುವ ಹೊಸ ಸಂಗತಿಯಲ್ಲ ಬದಲಾಗಿ ನಿಮಗೆ ಈಗಾಗಲೇ ಹೇಳಲಾಗಿರುವ ಹಳೆಯ ಸಂಗತಿಯಾಗಿದೆ" ಎಂಬದಾಗಿಯೂ ಇದನ್ನು ಭಾಷಾಂತರ ಮಾಡಬಹುದಾಗಿದೆ.

ಮೊದಲಿನಿಂದಲೂ

"ನೀವು ಪ್ರಾರಂಭದಲ್ಲಿ ಯೇಸು ಕ್ರಿಸ್ತನನ್ನು ನಂಬಿದಾಗಿನಿಂದಲೂ" (ಸ್ಪಷ್ಟ ಮತ್ತು ಸೂಚ್ಯ ನೋಡಿರಿ)

ಆದರೂ ನಾನು ನಿಮಗೆ ಹೊಸ ಆಜ್ಞೆಯನ್ನು ಬರೆಯುತ್ತಿದ್ದೇನೆ

"ಆದರೂ ಒಂದು ರೀತಿಯಲ್ಲಿ ನಾನು ಬರೆಯುತ್ತಿರುವ ಅಪ್ಪಣೆಯು ಹೊಸದೇ ಆಗಿದೆ" ಎಂಬದಾಗಿಯೂ ಇದನ್ನು ಭಾಷಾಂತರ ಮಾಡಬಹುದು.

ಕತ್ತಲೆಯು ಕಳೆದುಹೋಗುತ್ತಿದೆ, ನಿಜವಾದ ಬೆಳಕು ಪ್ರಕಾಶಿಸುತ್ತಿದೆ

ಇಲ್ಲಿ "ಕತ್ತಲೆಯು" ದುಷ್ಟತನವನ್ನು ಸೂಚಿಸುತ್ತದೆ ಮತ್ತು "ಬೆಳಕು" ಒಳ್ಳೇತನವನ್ನು ಸೂಚಿಸುತ್ತದೆ. "ಯಾಕೆಂದರೆ ನೀವು ಕೆಟ್ಟದನ್ನು ಮಾಡಲು ನಿರಾಕರಿಸುತ್ತಿದ್ದೀರಿ ಮತ್ತು ಹೆಚ್ಚೆಚ್ಚು ಒಳ್ಳೆಯದನ್ನು ಮಾಡುತ್ತಿದ್ದೀರಿ" ಎಂಬದಾಗಿಯೂ ಇದನ್ನು ಭಾಷಾಂತರ ಮಾಡಬಹುದು. (ರೂಪಕಾಲಂಕಾರವನ್ನು ನೋಡಿರಿ)