kn_tn/1JN/02/09.md

21 lines
4.4 KiB
Markdown

# ಹೇಳಿಕೊಳ್ಳುವವನು
"ಹೇಳಿಕೊಳ್ಳುವ ಯಾವನೇ ಆದರೂ" ಅಥವಾ "ಹೇಳಿಕೊಳ್ಳುವವರು" (ಯುಡಿಬಿ). ಇದು ಯಾವುದೇ ನಿರ್ದಿಷ್ಟವಾದ ವ್ಯಕ್ತಿಯನ್ನೂ ಸೂಚಿಸುವದಿಲ್ಲ.
# ಆತನು ಬೆಳಕಿನಲ್ಲಿದ್ದಾನೆ
ಇದು ಯಾವಾಗಲೂ ಕ್ರಮವಾಗಿ ಜೀವಿಸುವುದರ ಬಗ್ಗೆ ಮಾತನಾಡುತ್ತದೆ. ಜನರು ಒಳ್ಳೆಯ ಕಾರ್ಯಗಳನ್ನು ಮಾಡುವಾಗ, ಅದನ್ನು ಅವರು ಬೆಳಕಿನಲ್ಲಿ ಮಾಡುತ್ತಾರೆಯೇ ಹೊರತು ಕತ್ತಲೆಯಲ್ಲಿ ಅದನ್ನು ಮಾಡುವುದಿಲ್ಲ. "ಆತನು ಒಳ್ಳೆಯ ಕಾರ್ಯವನ್ನು ಮಾಡುತ್ತಾನೆ" ಅಥವಾ "ಆತನು ಒಳ್ಳೆಯದನ್ನು ಮಾಡುವುದರ ಮೂಲಕ ಬೆಳಕಿನಲ್ಲಿದ್ದಾನೆ" ಎಂಬದಾಗಿಯೂ ಭಾಷಾಂತರ ಮಾಡಬಹುದು. (ರೂಪಕಾಲಂಕಾರವನ್ನು ನೋಡಿರಿ)
# ಕತ್ತಲೆಯಲ್ಲಿದ್ದಾನೆ
ಪಾಪಿಯಾಗಿ ಜೀವಿಸುವದರ ಬಗ್ಗೆ ಹೇಳುವ ವಿಷಯ ಇದಾಗಿದೆ. ಜನರು ತಪ್ಪಾಗಿರುವ ಕಾರ್ಯಗಳನ್ನು ಮಾಡುವಾಗ, ಅದನ್ನು ಕತ್ತಲೆಯಲ್ಲಿ ಮಾಡಬೇಕೆಂದು ಬಯಸುತ್ತಾರೆ. "ಕತ್ತಲೆಯಲ್ಲಿ ಕೆಟ್ಟವುಗಳನ್ನು ಮಾಡುವುದು" ಎಂಬದಾಗಿ ಇದನ್ನು ಭಾಷಾಂತರ ಮಾಡಬಹುದು.
# ಅವನಲ್ಲಿ ವಿಘ್ನಕರವಾದದ್ದು ಏನೂ ಇಲ್ಲ
"ಅವನಿಗೆ ವಿಘನಕರವಾದದ್ದು ಏನೂ ಸಂಭವಿಸುವುದಿಲ್ಲ" "ವಿಘ್ನಕರವಾದದ್ದು" ಎಂಬದು ರೂಪಕಾಲಂಕಾರವಾಗಿದ್ದು, ಆತ್ಮೀಕವಾಗಿ ಅಥವಾ ನೈತಿಕವಾಗಿ ಸೋತುಹೋಗುವುದು ಎಂಬದು ಇದರ ಅರ್ಥವಾಗಿದೆ. "ಅವನು ಪಾಪ ಮಾಡುವಂತೆ ಯಾವುದು ಪ್ರೇರೇಪಿಸುವುದಿಲ್ಲ" ಅಥವಾ "ದೇವರಿಗೆ ಮೆಚ್ಚಿಕೆಯಾಗಿರುವದನ್ನು ಮಾಡುವದರಲ್ಲಿ ಅವನು ಎಂದಿಗೂ ಸೋತುಹೋಗುವುದಿಲ್ಲ" ಎಂಬದಾಗಿಯೂ ಇದನ್ನು ಭಾಷಾಂತರ ಮಾಡಬಹುದಾಗಿದೆ.
# ಅವನು ಕತ್ತಲೆಯಲ್ಲಿದ್ದಾನೆ ಮತ್ತು ಕತ್ತಲೆಯಲ್ಲಿ ಜೀವಿಸುತ್ತಾನೆ
"ಜೊತೆಯಲ್ಲಿರುವ ಸಹೋದರರನ್ನು ದ್ವೇಷಿಸುವುದು ಎಷ್ಟು ಕೆಟ್ಟದ್ದಾಗಿದೆ ಎಂಬದನ್ನು ತೋರಿಸುವುದಕ್ಕಾಗಿ ಈ ವಿಷಯವನ್ನು ಎರಡು ಸಲ ಹೇಳಲಾಗಿದೆ. "ಕತ್ತಲೆಯಲ್ಲಿ ಜೀವಿಸುತ್ತಿದ್ದಾನೆ" ಅಥವಾ "ಪಾಪದ ಕತ್ತಲೆಯಲ್ಲಿ ಜೀವಿಸುತ್ತಿದ್ದಾನೆ" ಎಂಬದಾಗಿ ಇದನ್ನು ಭಾಷಾಂತರ ಮಾಡಬಹುದಾಗಿದೆ. (ಜೋಡಿ ನೋಡಿರಿ)
# ತಾನು ಎಲ್ಲಿಗೆ ಹೋಗುತ್ತಿದ್ದೇನೆ ಎಂಬದು ಅವನಿಗೆ ಗೊತ್ತಿರುವದಿಲ್ಲ
ಇದು ರೂಪಕಾಲಂಕಾರವಾಗಿದ್ದು "ತಾನು ಮಾಡುತ್ತಿರುವುದರಲ್ಲಿ ಕೆಟ್ಟದ್ದು ಏನಿದೆ ಎಂಬದು ಅವನಿಗೆ ಗೊತ್ತಿರುವುದಿಲ್ಲ" ಎಂಬದಾಗಿಯೂ ಭಾಷಾಂತರ ಮಾಡಬಹುದಾಗಿದೆ.
# ಕತ್ತಲೆಯು ಅವನ ಕಣ್ಣುಗಳನ್ನು ಮಂಕು ಮಾಡಿದೆ
"ಕತ್ತಲೆಯು ಅವನು ನೋಡದ ಹಾಗೆ ಮಾಡಿದೆ." "ಸತ್ಯವನ್ನು ಅರ್ಥಮಾಡಿಕೊಳ್ಳದಂಥ ಅಸಾಧ್ಯವಾದ ಪರಿಸ್ಥಿತಿಯನ್ನು ಪಾಪವು ಸೃಷ್ಟಿಸಿದೆ" ಎಂಬದಾಗಿಯೂ ಇದನ್ನು ಭಾಷಾಂತರ ಮಾಡಬಹುದು.