3.5 KiB
ನನ್ನ ಪ್ರಿಯರಾದ ಮಕ್ಕಳೇ
ಯೋಹಾನನು ಹಿರಿಯನಾಗಿದ್ದನು ಮತ್ತು ಅವರ ನಾಯಕನಾಗಿದ್ದನು. ಅವರ ಮೇಲೆ ತನಗಿರುವ ಪ್ರೀತಿಯನ್ನು ತೋರಿಸುವುದಕ್ಕಾಗಿ ಈ ಪದವನ್ನು ಬಳಕೆ ಮಾಡಿದ್ದಾನೆ. "ಕ್ರಿಸ್ತನಲ್ಲಿ ನನ್ನ ಪ್ರಿಯರಾದ ಮಕ್ಕಳೇ" ಅಥವಾ "ನನ್ನ ಸ್ವಂತ ಮಕ್ಕಳಷ್ಟೇ ನನಗೆ ಪ್ರಿಯರಾಗಿರುವವರೇ." (ರೂಪಕಾಲಂಕಾರವನ್ನು ನೋಡಿರಿ)
ಈ ಮಾತುಗಳನ್ನು ನಿಮಗೆ ಬರೆಯುತ್ತೇನೆ
"ನಾನು ಈ ಪತ್ರಿಕೆಯನ್ನು ಬರೆಯುತ್ತಿದ್ದೇನೆ"
ಯಾವನಾದರೂ ಪಾಪ ಮಾಡಿದರೆ
ಇದು ಸಂಭವಿಸುವ ಸಾಧ್ಯತೆಯಿದೆ. "ಆದರೆ ಯಾವನಾದರೂ ಪಾಪ ಮಾಡಿದರೆ" (ಕಾಲ್ಪನಿಕ ಪರಿಸ್ಥಿತಿ ನೋಡಿರಿ)
ನಾವು..ನಮಗೆ
೧
೩ ವಚನಗಳಲ್ಲಿ ಈ ಪದಗಳು ಯೋಹಾನನು ಮತ್ತು ಆತನು ಈ ಪತ್ರಿಕೆಯನ್ನು ಯಾರಿಗೆ ಬರೆಯುತ್ತಿದ್ದಾನೋ ಅವರನ್ನು ಸೂಚಿಸುತ್ತದೆ. (ಒಳಗೊಂಡಿರುವುದನ್ನು ನೋಡಿರಿ)
ತಂದೆಯ ಬಳಿಯಿರುವ ಸಹಾಯಕನು
"ನಮ್ಮನ್ನು ಕ್ಷಮಿಸುವಂತೆ ತಂದೆಯಾದ ದೇವರ ಬಳಿ ಮಾತನಾಡುವವನು ಮತ್ತು ಕೇಳಿಕೊಳ್ಳುವವನು"
ನೀತಿವಂತನಾದ ಯೇಸು ಕ್ರಿಸ್ತನು
"ಯೇಸು ಕ್ರಿಸ್ತನೇ ಆ ವ್ಯಕ್ತಿಯಾಗಿದ್ದಾನೆ, ಈತನು ಮಾತ್ರವೇ ಪರಿಪೂರ್ಣತೆಯುಳ್ಳವನು"
ನಮ್ಮ ಪಾಪಗಳನ್ನು ನಿವಾರಣ ಮಾಡುವ ಯಜ್ಞ
"ಯೇಸು ಕ್ರಿಸ್ತನು ಸ್ವೇಚ್ಛೆಯಿಂದ ತನ್ನ ಪ್ರಾಣವನ್ನು ನಮಗಾಗಿ ಅರ್ಪಿಸಿದನು, ಆದ್ದರಿಂದ ಅದರ ಪರಿಣಾಮವಾಗಿ ದೇವರು ನಮ್ಮ ಪಾಪಗಳನ್ನು ಕ್ಷಮಿಸುತ್ತಾನೆ" (ಯುಡಿಬಿ)
ನಾವು ಆತನ ಆಜ್ಞೆಗಳನ್ನು ಕೈಗೊಂಡು ನಡೆದರೆ ಅದರ ಮೂಲಕ ಆತನನ್ನು ನಾವು ಬಲ್ಲೆವು ಎಂಬದನ್ನು ತಿಳಿದುಕೊಳ್ಳುತ್ತೇವೆ
"ಆತನನ್ನು ಬಲ್ಲೆವು" ಎಂಬ ಪದಾಂಶದ ಅರ್ಥ "ಆತನೊಂದಿಗೆ ನಮಗೆ ಒಳ್ಳೆಯ ಸಂಬಂಧವಿದೆ" ಎಂಬದಾಗಿದೆ. ಇದನ್ನು "ಅತನು ನಮಗೆ ಹೇಳುವದನ್ನು ನಾವು ಮಾಡುವುದಾದರೆ, ಆತನೊಂದಿಗೆ ನಮಗೆ ಒಳ್ಳೆಯ ಸಂಬಂಧವಿದೆ ಎಂಬದನ್ನು ದೃಢವಾಗಿ ಹೇಳಬಹುದು" ಎಂಬದಾಗಿ ಭಾಷಾಂತರ ಮಾಡಬಹುದು.
ಆತನು...ಆತನ
ಈ ಪದಗಳು ಯೇಸು ಕ್ರಿಸ್ತನನ್ನು ಅಥವಾ ದೇವರನ್ನು ಸೂಚಿಸುತ್ತವೆ. (ದ್ವಂಧ್ವಾರ್ಥತೆ ನೋಡಿರಿ)