# (ಯೇಸು ಕ್ರಿಸ್ತನು ಈ ಜನರೊಂದಿಗೆ ಮಾತನಾಡುವುದನ್ನು ಮುಂದುವರೆಸುತ್ತಿದ್ದಾನೆ.) # ಆಕಾಶದ ಕಡೆಗೆ ಕಣ್ಣೆತ್ತಿ ಇದು ರೂಪಕಾಲಂಕಾರವಾಗಿದ್ದು ಇದರ ಅರ್ಥ "ಆಕಾಶದ ಕಡೆಗೆ ನೋಡುತ್ತಾ" ಅಥವಾ "ಮೇಲಕ್ಕೆ ನೋಡುತ್ತಾ" (ರೂಪಕಾಲಂಕಾರ ನೋಡಿರಿ) # ತನ್ನ ಎದೆಬಡಕೊಳ್ಳುತ್ತಾ ಇದು ದುಃಖವನ್ನು ಸೂಚಿಸುವ ಭಾವನೆಯಾಗಿದೆ ಮತ್ತು ಈ ವ್ಯಕ್ತಿಯ ಪಶ್ಚಾತ್ತಾಪ ಮತ್ತು ದೀನತೆಯನ್ನು ತೋರಿಸುತ್ತದೆ. # ದೇವರೇ ಪಾಪಿಯಾದ ನನ್ನನ್ನು ಕರುಣಿಸು ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದಾಗಿದೆ "ದೇವರೇ ನಾನು ಘೋರವಾದ ಪಾಪಿಯಾಗಿದ್ದೇನೆ ದಯವಿಟ್ಟು ನನ್ನನ್ನು ಕರುಣಿಸು," ಅಥವಾ "ದೇವರೇ ದಯವಿಟ್ಟು ನನ್ನನ್ನು ಕರುಣಿಸು. ನಾನು ದೊಡ್ಡ ಪಾಪಿ." # ಆ ಫರಿಸಾಯದವನು "ಸುಂಕದವನು" # ಅಂಥವನಾಗಿ "ಅಂಥವನಾಗಿ ಅಲ್ಲದೆ" ಅಥವಾ "ಆ ವ್ಯಕ್ತಿಯ ಹಾಗಲ್ಲದೆ" ಅಥವಾ "ಮತ್ತೊಬ್ಬ ವ್ಯಕ್ತಿಯಂತಲ್ಲದೆ." ಇದನ್ನು ಈ ರೀತಿಯಾಗಿಯೂ ಭಾಷಾಂತರ ಮಾಡಬಹುದು "ಅವನು ನೀತಿವಂತನೆಂದು ನಿರ್ಣಹಿಸಲ್ಪಟ್ಟವನಾಗಿ ಹೋಗಲಿಲ್ಲ." # ಯಾಕೆಂದರೆ ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು... ಈ ಪದಾಂಶದೊಂದಿಗೆ, ಯೇಸು ಕ್ರಿಸ್ತನು ಕಥೆಯ ಕಡೆಯಿಂದ ತಿಳಿದುಕೊಳ್ಳಬೇಕಾದ ಸಾಮಾನ್ಯವಾದ ತತ್ವವನ್ನು ಸೂಚಿಸುತ್ತಿದ್ದಾನೆ. # ಹೆಚ್ಚಿಸಿಕೊಳ್ಳುವವನು "ಬಹಳವಾಗಿ ಸನ್ಮಾನ ಬಯಸುವವನು"